ಮೊನ್ನೆ ತಾನೇ ಸಿಎಂ ಬೊಮ್ಮಾಯಿರನ್ನು ಭೇಟಿ ಮಾಡಿದ ವಿಶೇಷಚೇತನ ಶಿವಪ್ಪ ತ್ರಿಚಕ್ರ ವಾಹನ ನೀಡುವಂತೆ ಮನವಿ ಮಾಡಿದ್ರು. ಆತನ ಸಮಸ್ಯೆ ಆಲಿಸಿ, ಸ್ಪಂದಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಕೂಡಲೇ ಕೊಪ್ಪಳ ಜಿಲ್ಲಾಧಿಕಾರಿಗೆ ಕರೆ ಮಾಡಿ, ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ರು. ಅದರಂತೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಅಡವಿಬಾವಿ ದೊಡ್ಡತಾಂಡ ಗ್ರಾಮದ ಶಿವಪ್ಪ ನಿವಾಸಕ್ಕೆ ತಹಶೀಲ್ದಾರ್ ಧನಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಶಿವಪ್ಪನ ಬಳಿ ಇರುವ ವಾಹನ ಅಪಘಾತದಿಂದಾಗಿ ಜಖಂಗೊಂಡಿರುವುದನ್ನು ಪರಿಶೀಲಿಸಿದ್ರು. ಇನ್ನು ಶಿವಪ್ಪ ಮಾತ್ರ ಬೆಂಗಳೂರಿನಿಂದ ಬಂದಿಲ್ಲ.
#PublicTV #CMBasavarajBommai #Koppala